ಚಿತ್ರ: ಓ ಮಲ್ಲಿಗೆ
ಸಾಹಿತ್ಯ: ವಿ. ಮನೋಹರ್
ಸಂಗೀತ: ವಿ. ಮನೋಹರ್
ಗಾಯನ: ಎಸ್. ಪಿ. ಬಾಲು

ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ (೨)

ಮಧುವಂತಿಗೆ ಮುಧ ಮಾತಿನ
ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ

ಸವಿಯಾದ ಸಾವಿರ ಸುಳ್ಳು
ಕವಿಯಾಗಿ ಹೇಳಿದ ಮೆಲ್ಲ
ಕಥೆ ಕೇಳಿ ನೈದಿಲೆ ನಯನೆ
ಜೊತೆಯಾಗೊ ಹಾಗಿದೆ ಎಲ್ಲ
ಸಂದೇಹಾನೆ ಸುಳಿಯದಂತೆ
ಹೊಸ ಸೂತ್ರ ಹುಸೀ ಪಾತ್ರ
ಕೆಂದೂತವೀಗ ನವಿಲಾಯ್ತು

ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ (೨)

ಕರ ಜೋಡಿಸಿ ವರ ಬೇಡಿದ
ಹೃದಯಾನ ಸೆರೆ ಹಿಡಿದ
ಮುದ್ದಾದ ಬಲೆ ಹೆಣೆದ
ಹುಡುಗೀನ ಒಳ ಕರೆದ

ವದನಾರವಿಂದದ ಮೇಲೆ
ಉದಯಾಸ್ತಮಾನದ ಲೀಲೆ
ಹೃದಯಾಂತರಾಳದ ಮೂಲೆ
ಅನುರಾಗ ಯಾಗದ ಶಾಲೆ
ಇದೇನಾಯ್ತು ಪವಾಡಾನ
ರತೀ ಮಂತ್ರ ಪ್ರಯೋಗಾನ
ಸುಗುಣವತಿ ಸ್ವಾದೀನ

ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ (೨)

ಮಧುವಂತಿಗೆ ಮುಧ ಮಾತಿನ
ಮಕರಂದ ಮಳೆ ಸುರಿದ
ಮುದ್ದಾದ ಬಲೆ ಹೆಣೆದ
ಹುಡುಗೀಗೆ ಕೊಡೆ ಹಿಡಿದ

ವರ್ಗ: ವಿ.ಮನೋಹರ್ ಸಾಹಿತ್ಯ
Category: ಓಂ ಮಲ್ಲಿಗೆ ಚಿತ್ರ
Category: ಕನ್ನಡ ಚಿತ್ರಸಾಹಿತ್ಯ
ವರ್ಗ: ಎಸ್. ಪಿ. ಬಾಲು ಗಾಯನ